<ಮಂಕುತಿಮ್ಮನ ಕಗ್ಗ
<ಮಂಕುತಿಮ್ಮನ ಕಗ್ಗ-ಕಂತು ೭; ಪದ್ಯ ೯೧ ರಿಂದ ೧೨೦;
<ಮಂಕುತಿಮ್ಮನ ಕಗ್ಗ-ಕಂತು ೬.ಪದ್ಯ ೧೫೧ ರಿಂದ ೧೮೦ ವರೆಗೆ:ಅರ್ಥಸಹಿತ.
ಮಂಕುತಿಮ್ಮನ ಕಗ್ಗ; ಪದ್ಯ ೧೮೧ ರಿಂದ ೨೧೦ ರ ವರೆಗೆ:ಅರ್ಥಸಹಿತ
ಪದ್ಯ – ೧೮೧
ಕ್ಷಣವೊಂದರೊಳೆ ಪೂರ್ತಿ ಕೊಲ್ಲುವುದು ಯಮಶೂಲ I
ಕ್ಷಣವನುಕ್ಷಣ ಕೊಲ್ಲುವುವು ಮೋಹಮಮತೆ II
ಕುನಿಕೆಯನು ನಿನ್ನ ಕೊರಳಿಗೆ ಹೂಡಿ ಚಿರಕಾಲ I 
ವಣುವಣುವೆ ಬಿಗಿಯುವುವೋ – ಮಂಕುತಿಮ್ಮ II
 ಕ್ಷಣವೊಂದರೊಳೆ = ಕ್ಷಣ + ಒಂದರೊಳೆ // ಕ್ಷಣವನುಕ್ಷಣ = ಕ್ಷಣ + ಅನುಕ್ಷಣ// ವಣುವಣುವೆ = ಅಣು + ಅಣುವೆ
 ಯಮನ ಶೂಲ ಕ್ಷಣ ಮಾತ್ರದಲ್ಲಿ ಒಂದೇ ಬಾರಿ ಕೊಲ್ಲುವುದು. ಆದರೆ ಈ ಜಗತ್ತಿನ ಮೋಹವು ನಮ್ಮಕುತ್ತಿಗೆಗೆ ಕುಣಿಕೆ ಹಾಕಿ ಅನುದಿನವೂ ಕ್ಷಣ ಕ್ಷಣವೂ ನಮ್ಮನ್ನು ಸೆಳೆಯುತ್ತಾ ಕೊಲ್ಲುತ್ತಲೇ ಇರುತ್ತದೆ. 
ಮಂಕುತಿಮ್ಮನ ಕಗ್ಗ - ಡಿ.ವಿ.ಜಿ.
♠೫೫೫೫೫೫೫೫೫೫೫೫೫೫೫೫೫೫♠
-೦♦♦♣♣♣♣♣♣♣♣♣♣♣♣♦♦೦-

ನೋಡಿ
<ಮಂಕುತಿಮ್ಮನ ಕಗ್ಗ-ಕಂತು ೬. ಅರ್ಥ ಸಹಿತ
ಮಂಕುತಿಮ್ಮನ ಕಗ್ಗ-ಕಂತು ೮.> ಅರ್ಥ ಸಹಿತ
ನೋಡಿ

ಉಲ್ಲೇಖ

 ಮಂಕುತಿಮ್ಮನ ಕಗ್ಗ
ವರ್ಗ: ಡಿ.ವಿ.ಜಿ. ಸಾಹಿತ್ಯ